New Ration Card Update : ಹೊಸ ರೇಷನ್ ಕಾರ್ಡ್ ಅರ್ಜಿ ಈ ದಿನದಂದು ಪ್ರಾರಂಭ ! ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ಹೊಸ ಪಡಿತರ ಚೀಟಿ ನಿರೀಕ್ಷೆಯಲ್ಲಿ ಯಾರೆಲ್ಲಾ ಕಾದು ಕುಳಿತಿದ್ದೀರೋ ಅಂತವರಿಗೆ ಇದು ಒಂದು ಸಿಹಿ ಸುದ್ದಿ ಎಂದು ಹೇಳಬಹುದು. ನೀವು ಈ ದಿನಾಂಕದಂದು ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ರೇಷನ್ ಕಾರ್ಡ್ ತಿದ್ದುಪಡಿಯನ್ನು ಮಾಡಿಸಿಕೊಳ್ಳಬಹುದು. ಹಾಗಿದ್ದರೆ ಆ ದಿನಾಂಕ ಏನು ಎಂಬುದರ ಬಗ್ಗೆ ಈಗ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.
ಸ್ನೇಹಿತರೆ ನಾವು ನಿಮಗೆ ದಿನನಿತ್ಯ ನಮ್ಮ ಮಾಧ್ಯಮದಲ್ಲಿ ನಿಮಗೆ ಇಂತಹ ಮಾಹಿತಿಗಳನ್ನು ನೀಡುತ್ತಾ ಇರುತ್ತೇವೆ. ನೀವು ದಿನನಿತ್ಯ ಇದೇ ತರದ ಮಾಹಿತಿಯನ್ನು ತಿಳಿಯಬೇಕಾದರೆ ನಮ್ಮ ಮಾಧ್ಯಮಕ್ಕೆ ಭೇಟಿ ಮಾಡಿ. ಹಾಗೆ ನಾವು ನಮ್ಮ ಮಾಧ್ಯಮದಲ್ಲಿ ನಿಮಗೆ ಅಂದರೆ ಯೋಜನೆ ಗಳಿಗೆ ಸಂಬಂಧಪಟ್ಟಂತ ಬರುವ ಮಾಹಿತಿಗಳು ಹಾಗೂ ಹುದ್ದೆಗಳಿಗೆ ಸಂಬಂಧಪಟ್ಟಂತೆ ಬರುವಂತಹ ಮಾಹಿತಿಗಳನ್ನು ನಾವು ದಿನನಿತ್ಯ ನಮ್ಮ ಮಾಧ್ಯಮಗಳಲ್ಲಿ ನಮ್ಮ ದಿನ ನಿತ್ಯ ಮಾಹಿತಿಯನ್ನು ನೀಡುತ್ತೇವೆ.
ಅರ್ಜಿ ಸಲ್ಲಿಸಲು ಅರ್ಹತೆಗಳು ಏನು ?
- ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕಾಗುತ್ತದೆ.
- ಯಾರ ಬಳಿ ರೇಷನ್ ಕಾರ್ಡ್ ಇಲ್ಲವೋ ಅಂತವರು ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.
- ಹಾಗೆ ಹೊಸದಾಗಿ ಮದುವೆ ಆದಂತಹ ದಂಪತಿಗಳು ಕೂಡ ಈ ಒಂದು ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬಹುದು.
- ಆನಂತರ ಅವರ ಕುಟುಂಬದ ವಾರ್ಷಿಕ ಆದಾಯದ ಮೇಲೆ ಅವರಿಗೆ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ಗಳನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು ?
- ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಗಳು
- ವೋಟರ್ ಐಡಿ
- ವಯಸ್ಸಿನ ಪ್ರಮಾಣ ಪತ್ರ
- ಜನನ ಪ್ರಮಾಣ ಪತ್ರ
- ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಸ್ವಯಂ ಘೋಷಣೆ ಪ್ರಮಾಣ ಪತ್ರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಸ್ನೇಹಿತರೆ ಈಗ ನಿಮ್ಮ ಬಳಿ ಎಲ್ಲಾ ದಾಖಲೆಗಳು ಸರಿಯಾದ ರೀತಿಯಲ್ಲಿ ಇದ್ದರೆ ನೀವು ಈ ದಿನದಂದು ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.
ಅರ್ಜಿಯನ್ನು ಸಲ್ಲಿಸುವುದು ಹೇಗೆ ?
ಸ್ನೇಹಿತರೆ ಈಗ ನೀವೇನಾದರೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ನೀವು ನಿಮ್ಮ ಹತ್ತಿರ ಇರುವಂತಹ CSC ಕೇಂದ್ರಗಳಿಗೆ ಹಾಗೂ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಿಗೆ ನೀವು ಭೇಟಿ ನೀಡಿ ಆನ್ಲೈನ್ ಮೂಲಕ ಈ ಎಲ್ಲ ದಾಖಲೆಗಳನ್ನು ನೀಡುವುದರ ಮೂಲಕ ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬಹುದು.
ಸ್ನೇಹಿತರೆ ಈಗಾಗಲೇ ತಿಳಿದು ಬಂದಿರುವಂತ ಮಾಹಿತಿಯ ಪ್ರಕಾರ ಸೆಪ್ಟೆಂಬರ್ 15 ರಿಂದ 30ನೇ ತಾರೀಖಿನ ಒಳಗಾಗಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಅವಕಾಶ ನೀಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಆದ್ದರಿಂದ ಆ ದಿನಾಂಕದ ಒಳಗಾಗಿ ನೀವು ಎಲ್ಲಾ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ತೆಗೆದು ಇಟ್ಟುಕೊಂಡು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.
ಇದನ್ನು ಓದಿ : JIO New Plans : ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ ! ಕಡಿಮೆ ಬೆಲೆಯ ಬೆಸ್ಟ್ ರಿಚಾರ್ಜ್ ಪ್ಲಾನ್ ಬಿಡುಗಡೆ.!
ಸ್ನೇಹಿತರೆ ಈಗ ನಾವು ನಿಮಗೆ ಹೊಸ ರೇಷನ್ ಕಾರ್ಡ್ ಗೆ ಸಂಬಂಧಪಟ್ಟಂತೆ ಈ ಮೇಲೆ ನೀಡಿರುವಂತಹ ಮಾಹಿತಿಯನ್ನು ನೀವು ಸರಿಯಾದ ರೀತಿಯಲ್ಲಿ ಓದಿಕೊಂಡು ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಿ. ಈ ಲೇಖನದಲ್ಲಿ ನೀಡಿರುವ ಮಾಹಿತಿ ಇಷ್ಟ ಆದರೆ ಇದನ್ನು ಎಲ್ಲರೊಂದಿಗೆ ಶೇರ್ ಮಾಡಿಕೊಳ್ಳಿ. ನೀವು ಈ ಲೇಖನವನ್ನು ಕೊನೆಯವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.