Goverment Subsidy Scheme : ಎಲ್ಲರಿಗೂ ಸಿಹಿ ಸುದ್ದಿ ಸ್ವಾಲಂಬಿ ಸಾರಥಿ, ಗಂಗಾ ಕಲ್ಯಾಣ ಯೋಜನೆ ಮತ್ತು ಇತರೆ ಯೋಜನೆಗಳಿಗೆ ಈಗ ಅರ್ಜಿಗಳು ಪ್ರಾರಂಭ! ಈ ಕೂಡಲೇ ನೀವು ಅರ್ಜಿಯನ್ನು ಸಲ್ಲಿಸಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ಸರ್ಕಾರವು ನೀಡುತ್ತಿರುವಂತಹ ಸಬ್ಸಿಡಿ ಯೋಜನೆಗಳಿಗೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಅರ್ಜಿಯನ್ನು ಸಲ್ಲಿಸಲು ಏನೆಲ್ಲ ದಾಖಲೆಗಳು ಬೇಕು ಅಷ್ಟೇ ಅಲ್ಲದೆ ಒಂದು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಿದರೆ ನಿಮಗೆ ಎಷ್ಟು ಸಬ್ಸಿಡಿ ದೊರೆಯುತ್ತದೆ ಎಂಬುದರ ಬಗ್ಗೆ ಈಗ ಸಂಪೂರ್ಣವಾದ ಮಾಹಿತಿಯನ್ನು ಈಗ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.
ಇದೀಗ ಸರ್ಕಾರವು 2024 – 25 ನೇ ಸಾಲಿನಲ್ಲಿ ಆರ್ಥಿಕವಾಗಿ ಅಭಿವೃದ್ಧಿಯನ್ನು ಮಾಡುವ ಸಲುವಾಗಿ ಈ ಕೆಳಕಂಡಂತಹ ಯೋಜನೆಗಳನ್ನು ಈಗ ಆನ್ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. ಈಗ ಯಾರೆಲ್ಲ ಅರ್ಹರೋ ಈ ಒಂದು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸಿ. ಈ ಒಂದು ಯೋಜನೆಗಳ ಲಾಭಗಳನ್ನು ಈಗ ಪಡೆದುಕೊಳ್ಳಬಹುದು. ಹಾಗಿದ್ದರೆ ಯಾವ್ಯಾವು ಆ ಯೋಜನೆಗಳು ಎಂಬುದರ ಬಗ್ಗೆ ಈಗ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಹಾಗಿದ್ದರೆ ಆ ಯೋಜನೆಗಳು ಯಾವವು
- ಗಂಗಾ ಕಲ್ಯಾಣ ಯೋಜನೆ
- ಉದ್ಯಮಶೀಲತಾ ಅಭಿವೃದ್ಧಿ ಯೋಜನೆ
- ಸ್ವಯಂ ಉದ್ಯೋಗ ನೇರ ಸಾಲ ಯೋಜನೆ
- ಸ್ವಾಲಂಬಿ ಸಾರಥಿ ಯೋಜನೆ
- ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆ
ಈಗ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದಾಗಿ ಈಗ ಈ ಕೆಳಗೆ ನೀಡಲಾಗಿರುವಂತಹ ಎಲ್ಲಾ ಯೋಜನೆಗಳಿಗೂ ಕೂಡ ಅರ್ಜಿಗಳನ್ನು ಪ್ರಾರಂಭ ಮಾಡಲಾಗಿದೆ. ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಒಂದು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸಿ, ಈ ಒಂದು ಯೋಜನೆಗಳ ಲಾಭಗಳನ್ನು ಪಡೆದುಕೊಳ್ಳಬಹುದು.
ಸ್ವಾಲಂಬಿ ಸಾರಥಿ ಯೋಜನೆಯ ಮಾಹಿತಿ
ಈಗ ಈ ಒಂದು ಯೋಜನೆಗೆ ನೀವು ಅರ್ಜಿಯನ್ನು ಸಲ್ಲಿಕೆ ಮಾಡಿದ್ದೆ ಆದರೆ ನೀವು ಸ್ವಂತ ಉದ್ಯೋಗವನ್ನು ಪ್ರಾರಂಭ ಮಾಡಲು ಸರಕು ವಾಹನ ಟ್ಯಾಕ್ಸಿ ಖರೀದಿಸುವ ಉದ್ದೇಶಕ್ಕೆ ಘಟಕ ವೆಚ್ಚದ ಶೇಕಡ 75 ರಷ್ಟು ಸಹಾಯಧನವನ್ನು ಅಂದರೆ ಗರಿಷ್ಠ 4 ಲಕ್ಷ ರೂಪಾಯಿವರೆಗೆ ಧನಸಹಾಯವನ್ನು ಈಗ ಸರ್ಕಾರವು ಈ ಒಂದು ಯೋಜನೆಯ ಮೂಲಕ ನೀಡಲಾಗುತ್ತದೆ.
ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯ ಮಾಹಿತಿ
ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿದಂತಹ ಅಭ್ಯರ್ಥಿಗಳಿಗೆ ವ್ಯಾಪಾರ ಮತ್ತು ಇತರೆ ಉದ್ಯಮಗಳಿಗೆ ಘಟಕ ವೆಚ್ಚದ ಶೇಕಡ 70ರಷ್ಟು ಸಹಾಯಧನವನ್ನು ನೀಡಲಾಗುತ್ತದೆ. ಅಂದರೆ 2 ಲಕ್ಷ ಸಹಾಯಧನವನ್ನು ನೀಡಲಾಗುತ್ತದೆ. ಇನ್ನುಳಿದಂತಹ ಹಣವನ್ನು ಬ್ಯಾಂಕ್ ನ ಮೂಲಕ ಸಾಲವಾಗಿ ನಿಮಗೆ ನೀಡುತ್ತಾರೆ.
ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯ ಮಾಹಿತಿ
ಈಗ ನೀವೇನಾದರೂ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದೆ ಆದರೆ ಸ್ವಯಂ ಉದ್ಯೋಗ ಪ್ರಾರಂಭ ಮಾಡಲು ಈಗ ಘಟಕ ವೆಚ್ಚದವರಿಗೆ ನಿಮಗೆ ಸಹಾಯಧನವನ್ನು ನೀಡಲಾಗುತ್ತದೆ. ಅಂದರೆ 50ಸಾವಿರ ಸಹಾಯಧನ ಮತ್ತು ಇನ್ನುಳಿದ 50 ಸಾವಿರ ಹಣವನ್ನು 4 ರಷ್ಟು ಬಡ್ಡಿ ದರದಲ್ಲಿ ನಿಮಗೆ ಸಾಲವನ್ನಾಗಿ ನೀಡಲಾಗುತ್ತದೆ.
ಪ್ರೇರಣಾ ಯೋಜನೆಯ ಮಾಹಿತಿ
ಈಗ ಮಹಿಳಾ ಸ್ವ ಸಹಾಯ ಸಂಘಗಳಿಗೆ ಕಿರುಸಾಲ ಮತ್ತು ಸಹಾಯಧನವನ್ನು ಕೂಡ ನೀಡಲಾಗುತ್ತದೆ. ಒಟ್ಟಾರೆಯಾಗಿ 2.50 ಲಕ್ಷ ಸಹಾಯಧನ ಮತ್ತು 1.50 ಲಕ್ಷ ಸಾಲವನ್ನು ಇವರಿಗೆ 4% ಬಡ್ಡಿದರದಲ್ಲಿ ನೀಡಲಾಗುತ್ತದೆ.
ಗಂಗಾ ಕಲ್ಯಾಣ ಯೋಜನೆಯ ಮಾಹಿತಿ
ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿದಂತಹ ರೈತರು 1.20 ಎಕರೆಯಿಂದ 5 ಎಕರೆ ಜಮೀನನ್ನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಈಗ ನೀರಾವರಿ ಸೌಲಭ್ಯವನ್ನು ಒಳಗೊದಗಿಸುವ ಸಲುವಾಗಿ ಕೊಳವೆ ಬಾವಿ ಕೊರೆದು ಪಂಪ್ ಸೆಟ್ ಅಳವಡಿಕೆ ಮಾಡಲು ಅವರಿಗೆ 4.25 ಲಕ್ಷ ಹಾಗೂ 3.25 ಲಕ್ಷ ಇದರಲ್ಲಿ 50,000 ಸಾಲವನ್ನು ಕೂಡ ಸೇರಿಕೆ ಮಾಡಿ ಸರ್ಕಾರವು ನೀಡುತ್ತದೆ.
ಪ್ರಮುಖ ದಿನಾಂಕಗಳು
- ಪ್ರಾರಂಭ ದಿನಾಂಕ: 23/ 10/ 2024
- ಕೊನೆಯ ದಿನಾಂಕ: 23/ 11/ 2024
ಅರ್ಜಿಯನ್ನು ಸಲ್ಲಿಸುವುದು ಹೇಗೆ ?
LINK : Apply Now
ಈಗ ನೀವೇನಾದರೂ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ನಿಮ್ಮ ಹತ್ತಿರ ಇರುವಂತ ಗ್ರಾಮಒನ್ ,ಕರ್ನಾಟಕ ಒನ್ ಅಥವಾ ಸಿಎಸ್ ಸಿ ಕೇಂದ್ರಗಳಿಗೆ ಭೇಟಿ ನೀಡಿ ಕೂಡ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಒಂದು ವೇಳೆ ನೀವೇನಾದರೂ ಮನೆಯಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ನಾವು ನಿಮಗೆ ಈ ಕೆಳಗೆ ನೀಡಿರುವಂತಹ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಂಡು ನೀವು ಕೂಡ ಮನೆಯಲ್ಲಿ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಈಗ ನಾವು ನಿಮಗೆ ಈ ಎಲ್ಲಾ ಯೋಜನೆಗಳ ಬಗ್ಗೆ ನಿಮಗೆ ನೀಡಿರುವಂತಹ ಮಾಹಿತಿ ಸರಿಯಾದ ರೀತಿಯಲ್ಲಿ ದೊರೆತಿದೆ ಎಂದು ನಾವು ಭಾವಿಸಿದ್ದೇವೆ. ಈ ಒಂದು ಲೇಖನದಲ್ಲಿ ನೀಡಿರುವಂತಹ ಎಲ್ಲಾ ಮಾಹಿತಿಗಳು ನಿಮಗೆ ಸರಿಯಾದ ರೀತಿಯಲ್ಲಿ ದೊರೆತಿದ್ದರೆ ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ಈ ಲೇಖನಗಳನ್ನು ನೀವು ಸರಿಯಾದ ರೀತಿಯಲ್ಲಿ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.