Ganga Kalyana Yojana Mahiti : ಉಚಿತವಾಗಿ ಬೋರ್ವೆಲ್ ಕೊರೆಸಲು ಅರ್ಜಿ ಸಲ್ಲಿಕೆ ಪ್ರಾರಂಭ.! ಈಗಲೇ ಅರ್ಜಿಯನ್ನು ಸಲ್ಲಿಸಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಲೇಖನದ ಮೂಲಕ ತಿಳಿಸಲು ಬಂದಿರುವಂತ ಮಾಹಿತಿ ಏನೆಂದರೆ ಉಚಿತ ಬೋರ್ವೆಲ್ ಕೊರೆಸಲು ಈಗ ವಿವಿಧ ವರ್ಗಗಳ ಮಾರ್ಗಗಳಿಂದ ಅರ್ಜಿಯನ್ನು ಕರೆಯಲಾಗಿದೆ. ಈಗ SC/ST ವರ್ಗದ ನಿಗಮದ ಮೂಲಕ ಆನ್ಲೈನ್ ಮೂಲಕ ಅರ್ಜಿಯನ್ನು ಕರೆಯಲಾಗಿದೆ. ರೈತರಿಗೆ ತಮ್ಮ ಹೊಲಗಳಲ್ಲಿ ಬೇಸಾಯ ಮಾಡಿಕೊಳ್ಳಲು ಹಾಗೂ ನೀರಾವರಿ ಅವಕಾಶಕ್ಕಾಗಿ ಈ ಒಂದು ಗಂಗಾ ಕಲ್ಯಾಣ ಯೋಜನೆಯನ್ನು ಸರ್ಕಾರ ಜಾರಿಗೆ ಮಾಡಿದೆ. ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಹೇಗೆ ಸಲ್ಲಿಕೆ ಮಾಡುವುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಸ್ನೇಹಿತರೆ ನಾವು ನಿಮಗೆ ದಿನನಿತ್ಯ ನಮ್ಮ ಮಾಧ್ಯಮದಲ್ಲಿ ನಿಮಗೆ ಇಂತಹ ಮಾಹಿತಿಗಳನ್ನು ನಾವು ನೀಡುತ್ತಾ ಇರುತ್ತೇವೆ. ಅಂದರೆ ರೈತರಿಗೆ ಸಹಾಯವಾಗುವಂತಹ ಎಲ್ಲ ರೀತಿಯ ಮಾಹಿತಿಗಳು ಹಾಗೂ ಯೋಜನೆಗಳಿಗೆ ಸಂಬಂಧಪಟ್ಟಂತೆ ಬರುವಂತಹ ಮಾಹಿತಿಗಳು ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ವಿದ್ಯಾರ್ಥಿ ವೇತನಗಳ ಬಗ್ಗೆ ಕೂಡ ನಾವು ಮಾಹಿತಿಯನ್ನು ನೀಡುತ್ತಾ ಇರುತ್ತೇವೆ.
ಗಂಗಾ ಕಲ್ಯಾಣ ಯೋಜನೆಯ ಸಹಾಯಧನ ಎಷ್ಟು ?
ಸ್ನೇಹಿತರೆ ಈಗ ಈ ಒಂದು ಕೊಳವೆ ಬಾವಿಯನ್ನು ಕೊರಿಸಲು ಒಟ್ಟು ಘಟಕದ ವೆಚ್ಚ ರೂಪಾಯಿ 4.75 ಲಕ್ಷದವರೆಗೆ ಆದರೆ ಇದರಲ್ಲಿ ವಿದ್ಯುತ್ ಉಪಕರಣಗಳ ವೆಚ್ಚವನ್ನು ರೂಪಾಯಿ 75,000 ಎಸ್ಕಕಾಂಗೆ ನೀಡಲಾಗುತ್ತದೆ. ಆನಂತರ ಘಟಕ ಪೂರ್ಣಗೊಳಿಸಲು ಸಾಧ್ಯವಾಗದೆ ಇದ್ದರೆ ಶೇಕಡ 4 ರ ಬಡ್ಡಿಯಲ್ಲಿ 50,000 ವರೆಗೆ ನಿಮಗೆ ಸಾಲವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಏನು ?
- ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮೇಲೆ ನಿಗದಿಪಡಿಸಿರುವಂತಹ ನಿಗಮಕ್ಕೆ ಸೇರಿರಬೇಕಾಗುತ್ತದೆ ಅಂದರೆ SC/ST ನಿಗಮಕ್ಕೆ ಸೇರಿರುವವರಾಗಿರಬೇಕು.
- ಆನಂತರ ಸಣ್ಣ ಮತ್ತು ಅತಿ ಸಣ್ಣ ರೈತರು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.
- ಆನಂತರ ಅರ್ಜಿದಾರರು ಕುಟುಂಬದಲ್ಲಿ ಯಾವುದೇ ರೀತಿಯಾಗಿ ವ್ಯಕ್ತಿಯು ಸರ್ಕಾರಿ ನೌಕರಿಯನ್ನು ಹೊಂದಿರಬಾರದು.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು ?
- ರೈತರ ಆಧಾರ್ ಕಾರ್ಡ್
- ಬ್ಯಾಂಕ್ ಖಾತೆಯ ವಿವರ
- ಅರ್ಜಿದಾರರ ಇತ್ತೀಚಿನ ಭಾವಚಿತ್ರ
- ಜಮೀನಿನ ಪಹಣಿ ಪತ್ರಗಳು
- ಸಣ್ಣ ಹಿಡುವಳಿದಾರರ ಪ್ರಮಾಣ ಪತ್ರ
- ರೇಷನ್ ಕಾರ್ಡ್
- ಕೊಳವೆ ಬಾವಿ ಇರದೇ ಇರುವಂತಹ ದೃಢೀಕರಣ
- ಮೊಬೈಲ್ ನಂಬರ್
ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ?
ಈಗ ನೀವೇನಾದರೂ ಈ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ನಾವು ಈ ಕೆಳಗೆ ನೀಡಿರುವ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ನೀವು ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಸೆಂಟರ್ ಗಳಿಗೆ ನೀವು ಭೇಟಿ ನೀಡಿ. ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಯೋಜನೆಯ ಲಾಭವನ್ನು ಈಗ ಪಡೆಯಬಹುದು.
ಇದನ್ನು ಓದಿ : Ration Card EKYC News : ರೇಷನ್ ಕಾರ್ಡ್ KYC ಯನ್ನು ಕಡ್ಡಾಯವಾಗಿ ಮಾಡಿಸಿ! ಇಲ್ಲದಿದ್ದರೆ ರೇಷನ್ ದೊರೆಯುವುದಿಲ್ಲ! ಇಲ್ಲಿದೆ ಮಾಹಿತಿ.
ಈಗ ನಾವು ನಿಮಗೆ ಈಗ ಈ ಗಂಗಾ ಕಲ್ಯಾಣ ಯೋಜನೆ ಬಗ್ಗೆ ಈ ಮೇಲೆ ನೀಡಿರುವಂತಹ ಮಾಹಿತಿ ಸರಿಯಾದ ರೀತಿಯಲ್ಲಿ ದೊರಕಿದ್ದರೆ ಇದನ್ನು ಎಲ್ಲರಿಗೂ ಶೇರ್ ಮಾಡಿಕೊಳ್ಳಿ. ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.